ಪೈರೊ ಸಲ್ಫ್ಯೂರಿಕ್ ಆಮ್ಲ (H2S2O7) ಗಂಧಕದ ಒಂದು ಆಕ್ಸಿಆಸಿಡ್. ಇದಕ್ಕೆ ಓಲಿಯಂ () ಅಥವಾ ಹೊಗೆಯಾಡುವ ಸಲ್ಫ್ಯೂರಿಕ್ ಆಮ್ಲ ( ) ಎಂದೂ ಹೆಸರು. == ತಯಾರಿಕೆ == ಸಾರಯುತ ಸಲ್ಫ್ಯೂರಿಕ್ ಆಮ್ಲದಲ್ಲಿ ( ) ಗಂಧಕದ ಟ್ರೈಆಕ್ಸೈಡು ವಿಲೀನವಾದಾಗ ಈ ಆಮ್ಲ ಮೈದಳೆಯುವುದು. ಆಂಶಿಕವಾಗಿ ನಿರ್ಜಲಗೊಂಡಿರುವ ಫೆರಸ್ ಸಲ್ಫೇಟಿನ ಹರಳುಗಳನ್ನು (FeSO4.H2O) ಆಸವಿಸಿ ಬಂದುದನ್ನು ಕೊಂಚ ಸಲ್ಫ್ಯೂರಿಕ್ ಆಮ್ಲವಿರುವ ಸಂಗ್ರಾಹಕದಲ್ಲಿ ಶೇಖರಿಸಿದಾಗ ಈ ಆಮ್ಲ ಉಂಟಾಗುವುದು. ಫೆರಸ್ ಸಲ್ಫೈಟಿನ ವಿಭಜನೆಯಿಂದ ಫೆರಿಕ್ ಸಲ್ಫೈಟ್ [Fe2(SO4)3] ಬರುತ್ತದೆ. ಇದು ಅನಂತರ ವಿಭಜಿಸಿ ಗಂಧಕದ ಟ್ರೈಆಕ್ಸೈಡನ್ನು ಬಿಡುಗಡೆ ಮಾಡುವುದು. ಗಂಧಕದ ಟ್ರೈಆಕ್ಸೈಡು ಸಂಗ್ರಾಹಕದಲ್ಲಿಟ್ಟಿರುವ ಸಲ್ಫ್ಯೂರಿಕ್ ಆಮ್ಲದಲ್ಲಿ ವಿಲೀನವಾಗಿ ಪೈರೂಸಲ್ಫ್ಯೂರಿಕ್ ಆಮ್ಲವನ್ನು ರೂಪಿಸುವುದು. ಈ ಆಮ್ಲವನ್ನು ತಯಾರಿಸುವ ಇನ್ನೊಂದು ವಿಧಾನವೆಂದರೆ ಸೋಡಿಯಂ ಬೈಸಲ್ಫೇಟನ್ನು 4000 ಸೆಂ. ಉಷ್ಣತೆಗೆ ಕಾಯಿಸುವುದು. ದೊರೆತ ಸೋಡಿಯಂ ಪೈರೊ ಸಲ್ಫೇಟನ್ನು ಸಾರಯುತ ಸಲ್ಫ್ಯೂರಿಕ್ ಆಮ್ಲದೊಂದಿಗೆ ಕಾಯಿಸಿ ಪೈರೋಸಲ್ಫ್ಯೂರಿಕ್ ಆಮ್ಲವನ್ನು ಪಡೆಯಬಹುದು. 2NaHSO4 → Na2S2O7 + H2O Na2S2O7 + H2SO4 → Na2SO4 + H2S2O7 ಗ್ರೀಕ್ ಭಾಷೆಯಲ್ಲಿ ಪೈರ್ ಎಂದರೆ ಬೆಂಕಿ ಎಂದರ್ಥ. ಬೈಸಲ್ಫೇಟನ್ನು ಕಾಯಿಸಿ ಪೈರೊ ಸಲ್ಪೇಟನ್ನು ಪಡೆಯಬಹುದಾದ್ದರಿಂದ ಆಮ್ಲಕ್ಕೆ ಈ ಹೆಸರು. == ಗುಣಗಳು == ಇದು ಸ್ನಿಗ್ಧವಾದ ಎಣ್ಣೆಯಂಥ ದ್ರವ. ಸಾರಯುತ ಸಲ್ಫ್ಯೂರಿಕ್ ಆಮ್ಲದಲ್ಲಿ ಗಂಧಕದ ಟ್ರೈಆಕ್ಸೈಡ್ ವಿವಿಧ ಪ್ರಮಾಣದಲ್ಲಿ ವಿಲೀನವಾಗಿ ಪೈರೊ ಸಲ್ಫ್ಯೂರಿಕ್ ಆಮ್ಲವಾಗಿದೆಯಷ್ಟೆ. ಇದು ಹೊಗೆಯಾಡಲು ಅದರಿಂದ ಗಂಧಕದ ಟ್ರೈಆಕ್ಸೈಡ್ ಎಲ್ಲ ಪಾರಾಗಿ ಸಲ್ಫ್ಯೂರಿಕ್ ಆಮ್ಲ ಮಾತ್ರ ಉಳಿಯುವುದು ಈ ಭಾವನೆಗೆ ಸಾಕ್ಷಿ. == ಉಪಯೋಗಗಳು == ಪೆಟ್ರೋಲಿಯಮಿನ ಸಂಸ್ಕರಣ, ವರ್ಣದ್ರವ್ಯಗಳ ಉತ್ಪಾದನೆ, ಸ್ಫೋಟಕಗಳು ಮತ್ತು ಕಪ್ಪು ಬೂಟ್‌ಪಾಲಿಷುಗಳ ತಯಾರಿಕೆಯಲ್ಲಿ ಈ ಆಮ್ಲದ ಪಾತ್ರ ಉಂಟು. == ಉಲ್ಲೇಖಗಳು ==